Congress President Rahul Gandhi in his report card, to the Bharatiya Janata Party (BJP)-led government at the Centre, gave an "F" with a remark terming Prime Minister Narendra Modi as "Master communicator with a short attention span".
ಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದೆ. ನಾಲ್ಕು ವರ್ಷಗಳ ಕಾಲ ಮೋದಿ ಸರ್ಕಾರ ಮಾಡಿದ ಸಾಧನೆಗಳು, ಎಡವಿದ ಹೆಜ್ಜೆಗಳ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಹೊತ್ತಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರ್ಕಾರಕ್ಕೆ F ಗ್ರೇಡ್ ನೀಡುವ ಮೂಲಕ ನಾಲ್ಕು ವರ್ಷದ ಸಾಧನೆ ತೀರಾ ಕಳಪೆ ಎಂದಿದ್ದಾರೆ! ಅಂದರೆ ರಾಹುಲ್ ಗಾಂಧಿ ಅವರ ಪ್ರಕಾರ ನಾಲ್ಕು ವರ್ಷದ ಆಡಳಿತ ಪರೀಕ್ಷೆಯಲ್ಲಿ ಮೋದಿ ಸರ್ಕಾರ ಫೇಲ್ ಆಗಿದೆ!